Karnataka political crisis: Siddaramaiah in 2015 when he was a chief minister had faced no confidence motion by CM HD Kumaraswamy led JDS. Now Siddaramaiah is playing a important role in saving HD Kumaraswamy government.
ಹೆಚ್ಚೇನಲ್ಲ, ಕೇವಲ ನಾಲ್ಕು ವರ್ಷಗಳ ಹಿಂದಷ್ಟೇ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಹುಮತವಿದ್ದರೂ ವಿಶ್ವಾಸಮತ ಸಾಬೀತು ಮಾಡಬೇಕಾದ ಸ್ಥಿತಿಗೆ ಬಂದಿದ್ದರು. ಅದಕ್ಕೆ ಕಾರಣವಾಗಿದ್ದು, ಈಗ ಮುಖ್ಯಮಂತ್ರಿಯಾಗಿ ಅದೇ ಸ್ಥಾನದಲ್ಲಿ ನಿಂತಿರುವ ಎಚ್ ಡಿ ಕುಮಾರಸ್ವಾಮಿ. ಆಗ ಮಾತ್ರವಲ್ಲ, ಎರಡು ವರ್ಷದ ಹಿಂದೆಯೂ ಸಿದ್ದರಾಮಯ್ಯ ಅವರಿಗೆ ಮಹತ್ವದ ಸಂದರ್ಭದಲ್ಲಿ ಜೆಡಿಎಸ್ ಕೈಕೊಟ್ಟಿತ್ತು.